'MYSURU RATHNAGALU' - Amazon INDIA (Paperback)
'MYSURU RATHNAGALU' - Notion Press INDIA (Paperback)
Here is an excerpt of the blurb on the back of the book:
ಇಪ್ಪತ್ತನೆ ಶತಮಾನದ ಆದಿಭಾಗದಲ್ಲಿ ಮೈಸೂರು ಸಂಸ್ಥಾನವು ಶ್ರೀ ನಾಲ್ವಡಿ ಕೃಷ್ಣರಾಜ ಓಡೆಯರ್ ಅವರ ಆಡಳಿತಕ್ಕೆ ಒಳಪಟ್ಟಿತ್ತು. ಈ ಸಂಧರ್ಭದಲ್ಲಿ ರಾಜಋಷಿಗಳ ಕನಸಿನ ಕೂಸಾದ ಮೈಸೂರು ವಿಶ್ವವಿದ್ಯಾನಿಲಯ ೧೯೧೯ರಲ್ಲಿ ಪ್ರಾರಂಭಗೊಂಡಿತು. ಶ್ರೀಮನ್ಮಹಾಜರು ದೇಶವಿದೇಶಗಳಿಂದ ಅತ್ಯುನ್ನತ ಪ್ರಾಧ್ಯಾಪಕ ವರ್ಗವನ್ನು ಮೈಸೂರಿನ ಮಹಾರಾಜ ಕಾಲೇಜು ಮತ್ತು ಸೆಂಟ್ರಲ್ ಕಾಲೇಜ್ ಬೆಂಗಳೂರಿಗೆ ನೇಮಿಸಿದರು. ಈ ಅತಿರಥ ಮಹಾರಥರ ಬಗ್ಗೆ ಡಾ।। ಎಸ್. ಎನ್. ಭಗೀರಥ್ ರವರು ಶತಮಾನೋತ್ಸವ ಸಂಧರ್ಭದಲ್ಲಿ ಮೈಸೂರಿನ ಸಂಧ್ಯಾ ಪತ್ರಿಕೆಯಾದ "ಸ್ಟಾರ್ ಆಫ್ ಮೈಸೂರ್”ಗೆ ಈ ವ್ಯಕ್ತಿ ಚಿತ್ರಣಗಳನ್ನು ಲೇಖನದ ರೂಪದಲ್ಲಿ ಪ್ರಕಟಣಗೊಳಿಸಿದರು. ಕೆಲವಾರು ಪಂಡಿತೋತ್ತಮರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ - ಡಾ।। ಆರ್. ಶಾಮಶಾಸ್ತ್ರೀ, ಪ್ರೊ. ಎಂ. ಹಿರಿಯಣ್ಣ, ಡಾ।। ಎಂ. ಹೆಚ್. ಕೃಷ್ಣ, ಡಾ।। ಡಿ. ಎಲ್. ನರಸಿಂಹಾಚಾರ್, ಡಾ।। ಜಿ. ವೆಂಕಟಸುಬ್ಬಯ್ಯ ಮತ್ತು ಡಾ।। ಎಂ. ಷಡಾಕ್ಪರಸ್ವಾಮಿ ಮತ್ತಿತ್ತರು.
ಈ ಇಪ್ಪತ್ತು ಲೇಖನಗಳು ಸಾವಿರಾರು ಓದುಗರ ಮೆಚ್ಚಿಗೆಯನ್ನು ಸಂಪಾದಿಸಿ ಕೊಂಡಿದೆ. ಆ ಸುವರ್ಣಯುಗದಲ್ಲಿ ವಿದ್ವತ್, ಪ್ರತಿಭೆ ಮತ್ತು ಪ್ರಾಮಾಣಿಕತೆ ಎಂಬ ಗುಣಗಳು ಮೆರೆದಾಡಿದವು. ಈಗಿನ ಸಮಾಜದಲ್ಲಿ ಜಾತೀಯತೆ, ಮೂಢ ನಂಬಿಕೆಗಳು, ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆ ತಾಂಡವಾಡುತ್ತಿದೆ. ಈ ಹಿರಿಯರ ಜೀವನ ಚರಿತ್ರೆ ಮತ್ತು ಸಾಧನೆ ನಮ್ಮೆಲರ ಉನ್ನತಿಗೆ ಮಾರ್ಗದರ್ಶನವಾಗಬಹುದು.
No comments:
Post a Comment